Thursday, 23 November 2017

ಇದು ನಿಮಗೆ ಅತಿಶಯೋಕ್ತಿ ಅನಿಸಬಹುದು ಅದ್ರು ನಿಜ....

ಇದು ನಿಮಗೆ ಅತಿಶಯೋಕ್ತಿ ಅನಿಸಬಹುದು ಅದ್ರು ನಿಜ.... ನನಗೆ ಒಂದು ನೋವು ಯಾವಾಗಲು ಕಾಡುತಿತು, ನನಗೆ ಒಬಳು ಅಕ್ಕ ಇಲ್ಲ ತಂಗಿ ಇರಬೇಕಿತು ಅಂಥ, ಅದು ಸುಮಾರು ಸಮಯ ಅಮ್ಮ ಅಪ್ಪಗೂ ಹೇಳಿದೆ. ಕಾರಣ ಒಂದು ಬವನಾತ್ಮಕ ಸಂಬಂದ, ನೋವಿನಲ್ಲೂ ಜೊತೆಗೆ ಇರುತ್ಹಿದಳು, ಹೇಳಿದ ಕೆಲಸ ಮಾಡುತಿದೆಲೇನೋ, ಒಂದು ಅದರ್ಶ ಹೆಣ್ಣುಹಾಗಿ ಕಾಣುವ ಹಂಬಲ ಹಾಗೂ ಸ್ವಾರ್ಥ್ ಕೂಡ ಅಂದ್ರು ತಪಗೋದಿಲ್ಲ. ಅ ನಿಟ್ಟನಲ್ಲಿ... ಇವತ್ತು ಹೆಮ್ಮೆ ಪಡುವ ಸಮಯ ಅಂತಾನೆ ಹೇಳಬೇಕು.... ನಮ್ಮ ಜೊತೆ ಹುಟ್ಟಿಲಾ ಅನೋದು ಬಿಟ್ರೆ...

ನಮ್ಮ ಮನೆಯ ಹೆಣ್ಣು ಮಕಳು ಸಾದನೆಯ ಹಾದಿಯಲ್ಲಿ ದಾಪುಗಾಲು ಇಡುತ್ಹಿದರೆ... ಮೊದಲಿಗೆ ನನ್ನ ಅತಿಗೆ ಆಶಾ ಅವರು ... ಶಾಲೆಯ  ಸಂಪೂರ್ಣ ಜವಾಬ್ದಾರಿ ತಗೆದುಕೊಂಡು ಶಾಲೆಯ ಸರ್ವಂಗಿನ ಬೆಳವಣಿಗೆಗೆ ಹಗಲಿರುಳು ದುಡಿಯುತಿದರೆ... ಮಾತೊಂದು ಕಡೆ ನನ್ನ ಮಡದಿ ವೀಣಾ ತಾನು ಮಾಡಿದ ವ್ಯಸಂಗವನು ಮೂಲವಾಗಿ ತಗೆದುಕೊಂಡು... ಕೊನೆಯ ಮೂರು ವಾರಗಳಿಂದ ಸೂಕ್ಷ್ಮ ಜೀವವಿಜ್ಞಾನ ಪ್ರಯೋಗಾಲಯ ದಲ್ಲಿ  ಜೈವಿಕ ವೈದ್ಯಕೀಯ ಸಹಾಯಕ ಹುದ್ದೆಯನ್ನು ಪ್ರಾರಂಬಿಸಿ ಯಶಸ್ವಿಯಾಗಿದ್ದಾಳೆ. ಅವಳ ಬದ್ಧತೆ, ಕಾರ್ಯಕ್ಷಮತೆ, ಸಮಯಪ್ರಜ್ಞೆ ನೋಡಿ.... ನಾನು ಮಂತ್ರ ಮುಗ್ದನಾಗಿದ್ದಿನಿ.... ಇವರಿಬ್ರ ಇದೆ ರೀತಿ ಮುಂದುವರೆದು ಒಳ್ಳೆ ಯಶಸ್ವಿಯಾಗಲಿ ಎಂದು ಶುಬಕೊರುತ್ಹೇನೆ...💐💐💐🙏

No comments: